ಭೂಮಿಕಾ ಶೆಟ್ಟಿ (ಭೂಮಿ ಶೆಟ್ಟಿ) , ಇವರು ಭಾರತೀಯ ಟೆಲಿವಿಷನ್ ನಟಿ, ಮಾಡೆಲ್ ಮತ್ತು ಡಿಸ್ಕ್ ಜಾಕಿ. ಇವರು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ೨೦೧೯ ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -೭ ನಲ್ಲಿ ಭಾಗವಹಿಸಿದ್ದು ಟಾಪ್ ೫ ಫೈನಲಿಸ್ಟ್ ಗಳಲ್ಲಿ ಬಬ್ಬರಾಗಿದ್ದರು. == ಜನನ , ಜೀವನ ಮತ್ತು ಶಿಕ್ಷಣ == ಭೂಮಿ ಶೆಟ್ಟಿ ಇವರು ೧೯ ಫೆಬ್ರವರಿ ೧೯೯೮ ರಂದು ಕುಂದಾಪುರದಲ್ಲಿ ಭಾಸ್ಕರ್ ಮತ್ತು ಬೇಬಿ ಶೆಟ್ಟಿ ದಂಪತಿಗೆ ಜನಿಸಿದರು. ಇವರು ಕುಂದಾಪುರದಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿಂದಲೇ ಶಾಲಾ ಶಿಕ್ಷಣವನ್ನು ಪಡೆದರು. ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು.ಕಾಲೇಜ್‌ನಿಂದ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ಎ.ಎಂ.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆದರು. ಅಂತಿಮವಾಗಿ ಇವರು ೨೦೧೯ ರಲ್ಲಿ ಬಿ.ಟೆಕ್ ಪದವಿ ಪಡೆದರು. == ವೃತ್ತಿಜೀವನ == ಬಾಲ್ಯದಿಂದಲೂ ಇವರು ಯಕ್ಷಗಾನ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದರು. ಇವರು ೨೦೧೮ ರಲ್ಲಿ ಕನ್ನಡ ಟೆಲಿವಿಷನ್ ಸರಣಿ ಕಿನ್ನರಿಯಲ್ಲಿ 'ಮಣಿ' ಪಾತ್ರಕ್ಕಾಗಿ ಆಡಿಷನ್ ನೀಡಿದರು. ಅವರ ಅಭಿನಯಕ್ಕಾಗಿ ಅವರು ಹೆಚ್ಚು ಮೆಚ್ಚುಗೆ ಪಡೆದರು. ನಂತರ ನಿನ್ನೆ ಪೆಳ್ಳಾಡತಾ ಎಂಬ ತೆಲುಗು ಧಾರವಾಹಿಯಲ್ಲಿ ನಟಿಸಿದರು. ಇವರು ಆಗಸ್ಟ್ ೨೦೧೮ ರಲ್ಲಿ ಈ ಪ್ರದರ್ಶನಕ್ಕೆ ಸೇರಿಕೊಂಡರು ಮತ್ತು ಅಕ್ಟೋಬರ್ ೨೦೧೯ ರವರೆಗೆ ಕೆಲಸ ಮಾಡಿದರು. ಅಭಿ ಪ್ರತಾಪ್, ಕ್ರಾಂತಿ ಬಲಿವಾಡಾ, ಸರಾಯು ಮತ್ತು ಅನುಶೌಮೇಶ್ ಹೆಗ್ಡೆ ಅವರೊಂದಿಗೆ ಇವರು ನಟಿಸಿದ್ದು , ೮ ತಿಂಗಳವರೆಗೆ ಈ ಧಾರವಾಹಿಯಲ್ಲಿ ನಟಿಸಿ ನಂತರ ತನ್ನ ಪಾತ್ರವನ್ನು ತೊರೆದರು ಮತ್ತು ಅವರ ಸ್ಥಾನವನ್ನು ನಟಿ ಮಧುಬಾಲಾ ಎಂಬವರು ವಹಿಸಿಕೊಂಡರು. ೨೦೧೯ ರಲ್ಲಿ, ಇವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ೭ ರಲ್ಲಿ ಭಾಗವಹಿಸಿ ಟಾಪ್ ೫ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು. == ನಟನಾ ಜೀವನ == === ಅಭಿನಯಿಸಿದ ಧಾರವಾಹಿಗಳು === === ಅಭಿನಯಿಸಿದ ಚಲನಚಿತ್ರಗಳು === == ಗೌರವಗಳು == ೨೦೧೮ ನೇ ಸಾಲಿನ ಹೈದರಬಾದ್ ಟೈಮ್ಸ್ ವತಿಯಿಂದ ಮೋಸ್ಟ್ ಡಿಸೈರೇಬಲ್ ವಿಮೆನ್ ಗೌರವ. == ಉಲ್ಲೇಖಗಳು ==